32 ವರ್ಷ ವಯಸ್ಸಿನ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ಕಣಕ್ಕೆ ಇಳಿದಾಗಿನಿಂದ ಸೋಲು ಕಂಡಿಲ್ಲ. ವಿಜೇಂದರ್ ಅವರು ಬಹುತೇಕ ಎಲ್ಲಾ ಪಂದ್ಯಗಳನ್ನು ನಾಕೌಟ್ ಮೂಲಕ ಗೆಲುವು ಸಾಧಿಸಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತ ಪರ ಕಂಚಿನ ಪದಕ ಗೆದ್ದಿದ್ದ ವಿಜೇಂದರ್ ಸಿಂಗ್ ಅವರು ವೃತ್ತಿಪರ ಬಾಕ್ಸಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಈಗ ವಿಜೇಂದರ್ ಸಿಂಗ್ ಅವರಿಗೆ ತರಬೇತಿ ನೀಡಲು WWE ಮಾಜಿ ಚಾಂಪಿಯನ್ ಜಿಂದರ್ ಮಹಲ್ ಮುಂದೆ ಬಂದಿದ್ದಾರೆ. ಜಿಮ್ ನಲ್ಲಿ ಜಿಂದರ್ ಮಹಲ್ ಹಾಗೂ ವಿಜೇಂದರ್ ಸಿಂಗ್ ಅವರು ಕಸರತ್ತು ಮಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ. WWE ಸೂಪರ್ ಸ್ಟಾರ್ ಜಿಂದರ್ ಅವರು ಸದ್ಯ ಭಾರತ ಪ್ರವಾಸದಲ್ಲಿದ್ದು ಟ್ರಿಪಲ್ ಎಚ್ ವಿರುದ್ಧ ಭಾರತದಲ್ಲಿ ಸೆಣೆಸಲಿದ್ದಾರೆ. ಭಾರತೀಯ ಮೂಲದ ಕೆನಡಾ ಕುಸ್ತಿ ಪಟು ಮಹಲ್ ಅವರು ನವದೆಹಲಿಯಲ್ಲಿ ಡಿಸೆಂಬರ್ 09ರಂದು ನಡೆಯಲಿರುವ WWE ಲೈವ್ ಶೋನಲ್ಲಿ ಹೋರಾಟ ನಡೆಸಲಿದ್ದಾರೆ. <br /> <br />The picture of WWE former champion 'the modern day maharaja ' training Indian boxer Vijender singh is going viral .